Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಸೌಕರ್ಯರಹಿತ ಜನರಿಗೆ 100 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ ಕೇರಳದ ಮುಖ್ಯೋಪಾಧ್ಯೆ

ಕೇರಳದ ಕೊಚ್ಚಿಯಲ್ಲಿರುವ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆ ಆರ್ ಲೇಡಿಸ್ ಕಾನ್ವೆಂಟನ್ ಪ್ರಾಂಶುಪಾಲರಾದ ಸಿಸ್ಟರ್ ಲಿಜ್ಜಿ ಚಕ್ಕಲಕಲ್ ಅವರು ಕಳೆದ ಐದು ವರ್ಷಗಳಲ್ಲಿ ಬಡವರಿಗಾಗಿ 100 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದಾರೆ. ಪ್ರತಿ ಮನೆಯ ಬೆಲೆಯು 5 ಲಕ್ಷ ರೂಪಾಯಿ ಬೆಳೆಯದಾಗಿದ್ದು ಅಡುಗೆಮನೆ, ಶೌಚಾಲಯ ಮತ್ತು ಇತರ ಕಾರ್ಯನಿರ್ವಹಿಸಬಲ್ಲ ಸೌಲಭ್ಯಗಳನ್ನು ಹೊಂದಿವೆ.

ಸೌಕರ್ಯರಹಿತ ಜನರಿಗೆ 100 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ ಕೇರಳದ ಮುಖ್ಯೋಪಾಧ್ಯೆ

Tuesday September 24, 2019 , 2 min Read

ಅವರ್ ಲೇಡಿಸ್ ಕಾನ್ವೆಂಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಲಿಜ್ಜಿ ಚಕ್ಕಲಕಲ್ ಐದು ವರ್ಷಗಳ ಹಿಂದೆ ಅವರ ಎಂಟನೇ ತರಗತಿಯ ವಿದ್ಯಾರ್ಥಿ ಕ್ಲಾರಾ ಬಾನುಗೆ ಮನೆಯಿಲ್ಲ ಎಂದು ಗುರುತಿಸಿದ್ದರು. ಅವಳು ಇತ್ತೀಚೆಗೆ ಕಲ್ಲುಕುಟಿಗರಾಗಿದ್ದ ತನ್ನ ತಂದೆಯನ್ನು ಕಳೆದುಕೊಂಡಿದ್ದಳು ಮತ್ತು ಅವಳ ಕುಟುಂಬಕ್ಕೆ ವಾಸಿಸುವುದಕ್ಕೂ ಆಶ್ರಯವಿರಲಿಲ್ಲ.


ತಮ್ಮ ವಿದ್ಯಾರ್ಥಿಯ ದುರದೃಷ್ಟಕರ ಅವಸ್ಥೆಯನ್ನು ನೋಡಿದ ಸಿಸ್ಟರ್ ಲಿಜ್ಜಿಯವರು, ಅವಳ ಕುಟುಂಬಕ್ಕೆ ಮನೆ ನಿರ್ಮಿಸಲು ಮುಂದಾದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ನೆರೆಹೊರೆಯವರು ಮತ್ತು ಇತರರಿಂದ ಹಣವನ್ನು ಸಂಗ್ರಹಿದರು. ಕ್ಲಾರಾ ಅವರ ಕುಟುಂಬವು ಅಂತಿಮವಾಗಿ 600 ಚದರ ಅಡಿಯ ಮನೆಯನ್ನು ತನ್ನದಾಗಿಸಿಕೊಂಡಿತು.


(ಚಿತ್ರಕೃಪೆ: ಎಫರ್ಟ್ಸ್ ಫಾರ್ ಗುಡ್)



ಇದು ಹೆಚ್ಚು ಅಗತ್ಯವಿರುವವರಿಗೆ ವಸತಿ ಒದಗಿಸುವ ನೇತೃತ್ವದ ಪ್ರಾರಂಭವಾಗಿತ್ತು. ಅದೇ ವರ್ಷ 2014 ರಲ್ಲಿ ನಡೆದ ತಮ್ಮ ಶಾಲೆಯ ಅಮೃತ ಮಹೋತ್ಸವ ಆಚರಣೆಯಲ್ಲಿ, ಸಿಸ್ಟರ್ ಲಿಜ್ಜಿ ಹೌಸ್ ಚಾಲೆಂಜ್ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದರು.


ಈಗ ಐದು ವರ್ಷಗಳ ನಂತರ, 100 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಇನ್ನೂ ಐದು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಎಫರ್ಟ್ಸ್ ಫಾರ್ ಗುಡ್ ವರದಿ ಮಾಡಿದೆ .


ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡುತ್ತಾ ಸಿಸ್ಟರ್ ಲಿಜ್ಜಿ,


"ಫೆಬ್ರವರಿಯ ಮಧ್ಯದಲ್ಲಿ 100 ನೇ ಮನೆಯ ನಿರ್ಮಾಣ ಪೂರ್ಣಗೊಂಡಿತು ಮತ್ತು ಅದರ ಕೀಲಿಯನ್ನು ಫೆಬ್ರವರಿ 28 ರಂದು ಚೆಲ್ಲಾನಂ ಮೂಲದ ಮನೆಯಿಲ್ಲದ ಕುಟುಂಬಕ್ಕೆ ನೀಡಲಾಯಿತು. ಅವರಿಗೆ ಇಬ್ಬರು ಹುಡುಗಿಯರಿದ್ದು, ಇಬ್ಬರೂ ನಮ್ಮ ವಿದ್ಯಾರ್ಥಿಗಳು" ಎಂದು ಹೇಳಿದರು.


ಇದು ಸಿಸ್ಟರ್ ಲಿಜ್ಜಿ ತಮ್ಮ ಶಾಲೆಯ ಮೂಲಕ ಪ್ರಾರಂಭಿಸಿದ ಏಕೈಕ ಯೋಜನೆಯಲ್ಲ, ಕಳೆದ ವರ್ಷ ಅಗಸ್ಟ್ ನಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ, ಅವರು ಪ್ರಾಜೆಕ್ಟ್ ಹೋಪ್ ಎಂಬ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿದರು. ತೀವ್ರವಾಗಿ ವಿನಾಶವಾದ ನೂರ ಐವತ್ತು ಮನೆಗಳನ್ನು ಈ ಯೋಜನೆಯಡಿ ದತ್ತು ಪಡೆದುಕೊಳ್ಳಲಾಯಿತು. ನಿಧಿಯಿಂದ ಮತ್ತು ಇತರ ಪ್ರಯತ್ನಗಳ ಸಹಾಯದ ಹಣದಿಂದ ಕೆಲವು ಮನೆಗಳನ್ನು ದುರಸ್ತಿ ಮಾಡಲಾಗುತ್ತಿದೆ ಮತ್ತು ಕೆಲವು ಮನೆಗಳನ್ನು ಸಂಪೂರ್ಣವಾಗಿ ಪುನರ್ನಿರ್ಮಿಸಲಾಗುತ್ತಿದೆ.


ಸೌಕರ್ಯರಹಿತ ಜನರಿಗೆ ಕಟ್ಟಿಸಿದ ಮನೆಗಳಲ್ಲೊಂದು (ಚಿತ್ರಕೃಪೆ: ಎಫರ್ಟ್ಸ್ ಫಾರ್ ಗುಡ್)



ಒಂದೇ ಮನೆಯ ನಿರ್ಮಾಣಕ್ಕೆ 15 ಲಕ್ಷ ರೂ.ಗಳ ಅಗತ್ಯವಿರುವುದರಿಂದ ಸಿಸ್ಟರ್ ಲಿಜ್ಜಿಗೆ ಇದು ಸುಲಭದ ಕೆಲಸವಲ್ಲ. ಬಡವರಿಗೆ ಮನೆಗಳನ್ನು ನಿರ್ಮಿಸುವ ಪ್ರಯತ್ನಗಳ ಕುರಿತು ಮಾತನಾಡಿದ ಸಿಸ್ಟರ್ ಲಿಜ್ಜಿ,


"ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದ ಉಡುಗೊರೆಗಳನ್ನು ಮತ್ತು ಪಾಕೆಟ್ ಮನಿಯನ್ನು ತಮ್ಮ ಇಷ್ಟದಿಂದ ದಾನ ಮಾಡುತ್ತಿದ್ದರು. ಶಿಕ್ಷಕರು ಮತ್ತು ಪೋಷಕರು ಆದರದಿಂದ ಸಹಾಯ ಮಾಡಿದರು. ಆದರೆ ಆಗ ಮುಂದುವರೆಯುವುದು ಕಷ್ಟವಾಗಿತ್ತು” ಎಂದರು.


ನೇತೃತ್ವದ ಹಿಂದಿನ ಶ್ರೇಷ್ಠ ಪ್ರಯತ್ನಗಳನ್ನು ಸಮುದಾಯವು ಅರಿತುಕೊಂಡ ನಂತರ, ಬೆಂಬಲವು ಬರಲಾರಂಭಿಸಿತು. ದೈನಂದಿನ ಕೂಲಿ ಕಾರ್ಮಿಕರಿಂದ ಹಿಡಿದು ರಾಜಕಾರಣಿಗಳವರೆಗೆ, ಅನೇಕರು ಮನೆಗಳನ್ನು ನಿರ್ಮಿಸಲು ಮುಂದೆ ಬಂದರು ಮತ್ತು ಅನಾಮಧೇಯರಾಗಿ ಉಳಿಯಲು ಬಯಸಿದರು.


ಸಿಸ್ಟರ್ ಲಿಜ್ಜಿ (ಮದ್ಯದಲ್ಲಿ ನಿಂತುಕೊಂಡಿರುವವರು) (ಮೂಲ: ಎಫರ್ಟ್ಸ್ ಫಾರ್ ಗುಡ್)

ಉಚಿತ ಕಾರ್ಮಿಕರು ಮತ್ತು ಕಟ್ಟಡ ಸಾಮಗ್ರಿಗಳೊಂದಿಗೆ ಮನೆಗಳನ್ನು 5 ಲಕ್ಷ ರೂ ಒಳಗೆ ನಿರ್ಮಿಸಲಾಗಿದೆ. ಎಲ್ಲಾ ಮನೆಗಳು 2 ಬಿಎಚ್‌ಕೆಗಳಾಗಿದ್ದು, ಶೌಚಾಲಯಗಳು ಮತ್ತು ಅಡುಗೆಮನೆಯೊಂದಿಗೆ ವಿಪತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ.


ಅನೇಕ ಫಲಾನುಭವಿಗಳ ಪೈಕಿ, ಸಿಸ್ಟರ್ ಲಿಜ್ಜಿಯವರು ಮನೆಯಿಂದಾಗಿ ಮಾನಸಿಕವಾಗಿ ವಿಕಲಚೇತನರಾದ ಮಹಿಳೆಯ ಜೀವನವು ಹೇಗೆ ಬದಲಾಯಿತು ಎಂಬುದರ ಕುರಿತು ಒಂದು ಕಥೆಯನ್ನು ಹಂಚಿಕೊಂಡರು:

“ನಾವು ಮಾನಸಿಕವಾಗಿ ಸದೃಢರಲ್ಲದ ಮಹಿಳೆಯೊಬ್ಬರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇವೆ, ಅವರು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿದ್ದರು. ಅವರು ತಮ್ಮ ಅತ್ತೆಯಿಂದ ಬೇರ್ಪಟ್ಟಾಗ, ಅದು ನಿಧಾನವಾಗಿ ಅವರಲ್ಲಿ ಮಾನಸಿಕ ಅಸ್ಥಿರತೆಯನ್ನು ಹುಟ್ಟುಹಾಕಿತು. ನಮ್ಮಿಂದ ಸ್ವಂತ ಮನೆ ಪಡೆದ ನಂತರ ಅದೇ ಮಹಿಳೆ ಕೆಲಸಕ್ಕೆ ಹೋಗಲು ಮತ್ತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರಾರಂಭಿಸಿದಳು ಎಂಬುದನ್ನು ನಂಬಲು ಅಸಾಧ್ಯ”


ಅವರು ಹೇಳುವಂತೆ, “ಇದು ಕೇವಲ ಮನೆಯನ್ನು ಹಸ್ತಾಂತರಿಸುವ ಬಗ್ಗೆ ಮಾತ್ರವಲ್ಲದೆ, ಉತ್ತಮ ಜೀವನದ ಕಡೆಗೆ ಸಂಪೂರ್ಣ ಬದಲಾಯಿಸುವ ಪ್ರಕ್ರಿಯೆಯಾಗಿದೆ”, ಎಂದು ಎಫರ್ಟ್ಸ್ ಫಾರ್ ಗುಡ್ ವರದಿ ಮಾಡಿದೆ.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.