ಮಕ್ಕಳ ಅಪೌಷ್ಟಿಕತೆ ತೊಲಗಿಸಲು ಚಂಡೀಗಡದಲ್ಲಿ ಬಂತು 'ಪೋಷನ್ ಆನ್ ವೀಲ್ಸ್'

ಈ ಮೊಬೈಲ್ ಅಂಗನವಾಡಿಗಳು ಒಂದು ನಿರ್ದಿಷ್ಟ ಪ್ರದೇಶದಾದ್ಯಂತ ಸಂಚರಿಸಿ, ಚಿಕ್ಕ ಮಕ್ಕಳಿಗೆ ಪೌಷ್ಟಿಕಾಂಶಯಕ್ತ ಆಹಾರವನ್ನು ಒದಗಿಸುತ್ತದೆ. ಹಾಗೂ ಈ ಸಂಘ ಆರು ವರ್ಷದೊಳಗಿನ ಮಕ್ಕಳಿಗೆ ಉತ್ತಮ ಆರೋಗ್ಯ‌ ಸೇವೆಯನ್ನು ಒದಗಿಸುವ "ಮಕ್ಕಳ‌‌ ಸಮಗ್ರ ಅಭಿವೃದ್ಧಿ ಸೇವೆ" ಎಂಬ ಯೋಜನೆಯನ್ನು ಸಹ ಒದಗಿಸುತ್ತಿದೆ.

ಮಕ್ಕಳ ಅಪೌಷ್ಟಿಕತೆ ತೊಲಗಿಸಲು ಚಂಡೀಗಡದಲ್ಲಿ ಬಂತು 'ಪೋಷನ್ ಆನ್ ವೀಲ್ಸ್'

Friday December 06, 2019,

2 min Read

ಈಗ ಪ್ರಕಟನೆಯಾಗಿರುವ ಜಾಗತಿಕ ಹಸಿವು ಸೂಚ್ಯಂಕ 2019 ರಂತೆ, ನಮ್ಮ ಭಾರತವು 30.3 ಅಂಕಗಳೊಂದಿಗೆ 102ನೇ ಸ್ಥಾನದಲ್ಲಿದೆ. ಅಂದರೆ, ಭಾರತ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 9.3 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.


ಅಪೌಷ್ಟಿಕತೆಯ ವಿರುದ್ದ ಹೋರಾಡಲು ಸರ್ಕಾರ ಹಲವಾರು ಯೋಜನೆಗಳನ್ನು ‌ಜಾರಿಗೊಳಿಸಿದೆ, ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಮಧ್ಯಾಹ್ನದ ಊಟ ಹಾಗೂ‌ ಒಂದು ರೂಪಾಯಿಗೇ ಕ್ಯಾಂಟಿನ್ ನ ಸೌಲಭ್ಯ‌ ಒದಗಿಸುವುದು. ‌ಅದಲ್ಲದೇ "ಖುಷಿಯಾನ್ ಪೌಂಡೇಶನ" ಎಂಬ ಸರ್ಕಾರೇತರ ಸಂಸ್ಥೆ "ರೋಟಿ ಘರ್" ಎಂಬ ಒಂದು ವಿಶೇಷ ಕಾರ್ಯಕ್ರಮವನ್ನು‌ ಪ್ರಾರಂಭಿಸಿ, ಅದರ ಮೂಲಕ ದಿನಕ್ಕೆ ಒಂದು ಹೊತ್ತಿನ ಉಚಿತ ಪೌಷ್ಟಿಕ ಆಹಾರವನ್ನು ‌ಒದಗಿಸುತ್ತದೆ. ಹಾಗೂ ಪ್ರತಿದಿನ‌ ಸುಮಾರು ಒಂದು ಸಾವಿರದಷ್ಟು ಬಡ ಮಕ್ಕಳ್ಳಿಗೆ ಆಹಾರವನ್ನು ಈ ಯೋಜನೆಯ ಮೂಲಕ ಒದಗಿಸಲಾಗುತ್ತಿದೆ.


ಅಪೌಷ್ಟಿಕತೆಯನ್ನು ತೊಲಗಿಸಲು, ಹಾಗೂ ಅಪೌಷ್ಟಿಕತೆಯ ವಿರುದ್ದ ‌ಹೋರಾಡಲೂ ಮತ್ತಷ್ಟು ಉತ್ತೇಜನವನ್ನು ನೀಡಲು, ಈಗಿನ ಪಂಜಾಬಿನ‌ ಗವರ್ನರ್ ಹಾಗೂ ಕೇಂದ್ರ ಪ್ರಾಂತ್ಯದ ಆಡಳಿತಾದಿಕಾರಿಯಾದ ವಿ. ಪಿ. ಸಿಂಗ್ ಬದ್ನೋರ್ ಅವರು ಚಂಡೀಗಡನಲ್ಲಿ "ಪೋಷನ್ ಆನ್ ವೀಲ್ಸ್" ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಅಧಿಕಾರಿಗಳು ವಾಹನದ ವ್ಯವಸ್ಥೆಯನ್ನು ಗಮನಿಸಿಸುತ್ತಿರುವುದು (ಚಿತ್ರಕೃಪೆ: ಇಂಡಿಯನ್‌ ಎಕ್ಸ್‌ ಪ್ರೆಸ್)




ಈ ಉಪಕ್ರಮದ ಕುರಿತು ಮಾತನಾಡಿದ ವಿ. ಪಿ. ಸಿಂಗ್ ಅವರು,


"ಪೋಷನ ಆನ್ ವೀಲ್ಸ್ ಇದು ಒಂದು ವಿಶಿಷ್ಟವಾದ ಅಭಿಯಾನ. ಪೋಷನ ಎಂಬ ಅಭಿಯಾನದ ಅಡಿಯಲ್ಲಿ, ಮೊಬೈಲ್ ಅಂಗನವಾಡಿ ವ್ಯಾನಗಳನ್ನು ಜಾರಿಗೊಳಸಿದ್ದು, ಇದರ ಮೂಲಕ ವಿಶೇಷವಾಗಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ವಾಸವಾಗಿರುವ ನವಜಾತ ಶಿಶುಗಳು ಹಾಗೂ ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕ ಆಹಾರವನ್ನು ಕೊಂಡೊಯ್ಯಲಾಗುತ್ತದೆ‌,” ವರದಿ ಎನ್ ಡಿ ಟಿವಿ.


ಈ ಅಭಿಯಾನದ ಅಡಿ ಚಂಡೀಗಡದಲ್ಲಿ ಎರಡು ಮೊಬೈಲ್ ಅಂಗನವಾಡಿ ವ್ಯಾನಗಳನ್ನು ಬಿಡುಗಡೆ ಮಾಡಲಾಗಿದೆ. ಈ ವ್ಯಾನಗಳು ಒಂದು ನಿರ್ದಿಷ್ಟ ಪ್ರದೇಶದಾದ್ಯಂತ ಸಂಚರಿಸಿ, ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ‌‌. ಹಾಗೂ ಇದು ಆರು ವರ್ಷದೊಳಗಿನ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ‘ಮಕ್ಕಳ ಸಮಗ್ರ ಅಭಿವೃದ್ಧಿ ಸೇವೆ' ಎಂಬ ಯೋಚನೆಯ ಲಾಭವನ್ನು ಒದಗಿಸುತ್ತದೆ.


ಒಬ್ಬರ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ, ಈ ಆಹಾರದ ಪಟ್ಟಿಯಲ್ಲಿ ಅಕ್ಕಿ, ದ್ವಿದಳ ಧಾನ್ಯಗಳು, ರೊಟ್ಟಿ ಮತ್ತು ಹಾಲು ಹಾಗೂ ಇತರ ಪೌಷ್ಟಿಕಾಂಶವುಳ್ಳ ಆಹಾರಗಳು ಇವೆ. ಸಮಾಜ ಕಲ್ಯಾಣ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ‌ಸಲಹೆಗಾರರಾದ ಸರಿತಾ ವೊಡ್ವಾನಿ ಅವರ ಪ್ರಕಾರ ಈ ಆಹಾರದ ಪಟ್ಟಿ ಪ್ರತಿದಿನ ಬದಲಾಗುತ್ತದೆ, ಹಾಗೂ ಈ ಪ್ರದೇಶದ ಹಿಂದೂಳಿದ ವರ್ಗಗಳಿಗೆ ಪೌಷ್ಟಿಕ ಆಹಾರವನ್ನು ಪೂರೈಸವುದರ ಮೇಲೆ ಈ ಅಭಿಯಾನವು ಕೇಂದ್ರೀಕರಿಸುತ್ತದೆ.


ಈ ಯೋಜನೆಯ ಮೂಲಕ ಚಿಕ್ಕ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹದಿಹರೆಯದ ಹುಡಗಿಯರನ್ನು ಒಳಗೊಂಡಂತೆ ಸುಮಾರು 400ಕ್ಕೂ ಹೆಚ್ಚು ಜನರು ಈ ಯೋಜನೆಯ ಪ್ರಯೋಜನವನ್ನು ಪಡೆಯುಲಿದ್ದಾರೆ ಎಂದು ಅಂದಾಜಿಸಲಾಗಿದೆ.


ಚಂಡೀಗಡದ ಕಟ್ಟಡ ನಿರ್ಮಾಣದ‌ ಸ್ಥಳಗಳಾದ ಕಾಲೋನಿ ನಂ. 4 (ಇ ಡಬ್ಲೂ ಎಸ್ ಮನೆಗಳು) ಸಂಜಯ ಕಾಲೋನಿಯ ಕೈಗಾರಿಕ ಪ್ರದೇಶ, ಪೋಲಿಸ ಮಹಡಿ, ಪಿಜಿಐ, ಹಾಗೂ ಕಾರ್ಯದರ್ಶಿ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಪ್ರದೇಶಗಳಿಗೆ ವ್ಯಾನನ ಮೂಲಕ ಅಹಾರ ಒದಗಿಸಲಾಗುವುದು, ವರದಿ ಇಂಡಿಯನ್ ಎಕ್ಸ್‌ಪ್ರೆಸ್‌.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.