Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಮಧ್ಯಪ್ರದೇಶದಲ್ಲೊಂದು ಸ್ಮಾರ್ಟ್‌ ಸರಕಾರಿ ಶಾಲೆ

ಮಧ್ಯಪ್ರದೇಶದ ನರ್ಸಿಂಗ್‌ಪುರ ಜಿಲ್ಲೆಯ ಖಮರಿಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ್ ಗುಪ್ತಾ ಅವರ ಪ್ರಯತ್ನದ ಫಲವಾಗಿ ಶಾಲೆ ಬರೋಬ್ಬರಿ 3117 ವಿದ್ಯಾರ್ಥಿ ಬಲವನ್ನು ಹೊಂದಿದ್ದು ಈ ಪ್ರದೇಶದ ಹೆಚ್ಚು ಬೇಡಿಕೆಯಿರುವ ಶಾಲೆಗಳಲ್ಲಿ ಒಂದಾಗಿದೆ.

ಮಧ್ಯಪ್ರದೇಶದಲ್ಲೊಂದು ಸ್ಮಾರ್ಟ್‌ ಸರಕಾರಿ ಶಾಲೆ

Monday December 09, 2019 , 3 min Read

"ಕೌಶಲ್ಯ ಮತ್ತು ಪರಿಣತಿಯೊಂದಿಗೆ ಉತ್ತಮ ಮನುಷ್ಯರನ್ನು ರೂಪಿಸುವುದು ಶಿಕ್ಷಣದ ಉದ್ದೇಶ…ಪ್ರಬುದ್ಧ ಮನುಷ್ಯರನ್ನು ಶಿಕ್ಷಕರಿಂದ ಮಾತ್ರ ರಚಿಸಬಹುದು."


ಹೀಗೆಂದವರು ನಮ್ಮ ದೇಶದ ಮಾಜಿ ರಾಷ್ಟ್ರಪತಿ, ಭಾರತದ ಕ್ಷಿಪಣಿಮನುಷ್ಯ ಅಬ್ದುಲ್ ಕಲಾಂ ಜಿ ಅವರು. ನಿಜ ಓರ್ವ ಸೃಜನಶೀಲ ಶಿಕ್ಷಕ ತನ್ನ ವಿದ್ಯಾರ್ಥಿಗಳನ್ನು ಪ್ರಬುದ್ಧರನ್ನಾಗಿ ಮಾಡಿ ಸಮಾಜಕ್ಕೆ ನೀಡುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ, ಉನ್ನತ ಸಾಧನೆಗೈದ ಪ್ರತಿಯೊಬ್ಬರ ಹಿಂದೆ ತಮ್ಮ ಯಾವುದಾದರೂ ಒರ್ವ ಶಿಕ್ಷಕರ ಪ್ರಭಾವವಿರುತ್ತದೆ ಎಂದರೆ ತಪ್ಪಾಗಲಾರದು.


ಶಾಲೆಯ ಆವರಣವೇ ಮುಂದಿನ ಭವಿಷ್ಯವನ್ನು ರೂಪಿಸುತ್ತವೆ ಎನ್ನುತ್ತಾರೆ ತಜ್ಞರು, ಆದರೆ ಒಮ್ಮೆ ನಮ್ಮ ದೇಶದ ಸರಕಾರಿ ಶಾಲೆಗಳತ್ತ ಗಮನ ಹರಿಸಿದರೆ ಕಾಣುವ ಚಿತ್ರಣವೇ ಬೇರೆ. ಶಿಥಿಲಾವಸ್ಥತೆಗೆ ತಲುಪಿರುವ ಕಟ್ಟಡ, ಎದ್ದುಕಾಣುವ ಮೂಲಭೂತ ಸೌಕರ್ಯಗಳ ಕೊರತೆ, ಗೈರು ಹಾಜರಾಗುವ ಮಕ್ಕಳು, ಹೀಗೆ ಪಟ್ಟಿ ಇಟ್ಟರೆ ಮುಗಿಯುದಿಲ್ಲ.


ಇವೆಲ್ಲಾ ಸಮಸ್ಯೆಗಳು ನಿಜ, ಎಲ್ಲಿಯವರೆಗೆ ನಾವು ಅದಕ್ಕೆ ಪರಿಹಾರವನ್ನು ಹುಡುಕಿಕೊಳ್ಳುತ್ತೇವೆಯೋ ಅಲ್ಲಿಯವರೆಗೆ ಸಮಸ್ಯೆಗಳು ಬರಿಯ ಸಮಸ್ಯೆಗಳು, ತಮ್ಮ ಊರಿನಲ್ಲಿದ್ದ ತಾವು ಕಲಿತ ಸರಕಾರಿ ಶಾಲೆಯ ಅಧೋಗತಿಯನ್ನು ಕಂಡು, ಎಲ್ಲರಂತೆ ಸುಮ್ಮನೆ ಮರುಗಿ ಕೈಚೆಲ್ಲಿ ಕೂರದೆ, ಸರಕಾರಿ ಶಾಲೆ ಎಂದು ಮುಗುಮುರಿಯುವವರು ಕೂಡ ಮೂಗಿನ ಮೇಲೆ ಬೆರಲಿಟ್ಟು ನೋಡುವಂತೆ, ಕಾನ್ವೆಂಟ್ ಮೊರೆ ಹೋದ ಹೆತ್ತವರು ಕೂಡ ಮರಳಿ ಸರಕಾರಿ ಶಾಲೆಯತ್ತ ಮರಳುವಂತೆ ಮಾಡಿರುವುದು ಬೇರಾರು ಅಲ್ಲ ಓರ್ವ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರು.


ಮಧ್ಯಪ್ರದೇಶದ ನರ್ಸಿಂಗ್‌ಪುರ ಜಿಲ್ಲೆಯ ಖಮರಿಯಾ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಾರಾಯಣ್ ಗುಪ್ತಾ ಅವರ ಪ್ರಯತ್ನದ ಫಲವಾಗಿ ಇಂದು ಖಮರಿಯಾ ಸರ್ಕಾರಿ ಶಾಲೆ ಬರೋಬ್ಬರಿ 3117 ವಿದ್ಯಾರ್ಥಿ ಬಲವನ್ನು ಹೊಂದಿದ್ದು ಈ ಪ್ರದೇಶದ ಹೆಚ್ಚು ಬೇಡಿಕೆಯಿರುವ ಶಾಲೆಗಳಲ್ಲಿ ಒಂದಾಗಿದೆ.


ಸ್ಮಾರ್ಟ್ ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು (ಚಿತ್ರಕೃಪೆ: ಎಡೆಕ್ಸ್ ಲೈವ್)


ವಾಸ್ತವಾಗಿ ಮುಖ್ಯ ಶಿಕ್ಷಕರಾದ ನಾರಾಯಣ ಗುಪ್ತಾ ಅವರು ಈ ಶಾಲೆಯ ಹಳೆಯ ವಿದ್ಯಾರ್ಥಿ ಆಗಿದ್ದು, ತಾವು ವಿದ್ಯಾರ್ಥಿ ಆಗಿದ್ದಾಗಲೇ ಈ ಶಾಲೆ ಶಿಥಿಲಾವಸ್ಥೆಗೆ ತಲುಪಿತ್ತು, ನಂತರ ತಾವು ಕಲಿತ ಶಾಲೆಗೆ ತಾವೇ ಮುಖ್ಯೋಪಾಧ್ಯಾಯರಾಗಿ ಬಂದ ನಾರಾಯಣ್ ಗುಪ್ತ, ತಮ್ಮ ಶಾಲೆಯ ಜೀರ್ಣೋದ್ಧಾರಕ್ಕೆ ಮುಂದಾದರು. ನಾರಾಯಣ ಗುಪ್ತ ಅವರು 2012 ರಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ 1.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ಶಾಲೆಯ ನವೀಕರಣಕ್ಕೆ ಮುಂದಾದರು, ವರದಿ ಎಡೆಕ್ಸ್ ಲೈವ್.


ವಿದ್ಯಾರ್ಥಿಗಳಿಗೆ ಸರಕಾರಿ ಶಾಲೆ ಆಕರ್ಷಕವಾಗಿ ಕಾಣಲು, ಮತ್ತು ಅವರ ಜ್ಞಾನ ಭಂಡಾರವನ್ನು ವಿಸ್ತರಿಸಲು ಆಧುನಿಕ ತಂತ್ರಜ್ಞಾನದ ಅವಶ್ಯಕತೆ ಇರುವುದನ್ನು ಮನಗಂಡ ನಾರಾಯಣ ಗುಪ್ತ ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ತಂದರು, ಈ ಬದಲಾವಣೆಗಳೇ ಈ ಶಾಲೆಯನ್ನ ಮಾದರಿ ಶಾಲೆಯಾಗಿಸಿದೆ.


2012 ರಲ್ಲಿ ಸ್ಥಾಪನೆಯಾದ ಈ ಶಾಲೆಯಲ್ಲಿ ಭದ್ರತೆಗಾಗಿ ಕ್ಲೋಸ್ಡ್-ಸರ್ಕ್ಯೂಟ್ ಕ್ಯಾಮೆರಾಗಳು ಮತ್ತು ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನ, ಎಲ್‌ಸಿಡಿ ಟಿವಿಗಳು, ಕೌಶಲ್ಯ ಅಭಿವೃದ್ಧಿ ತರಗತಿಗಳು ಮತ್ತು ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯೊಂದಿಗೆ ತರಗತಿ ಕೊಠಡಿಗಳಿವೆ. ಅನಿಯಮಿತ ವಿದ್ಯುತ್ ಸರಬರಾಜನ್ನು ನಿವಾರಿಸಲು, ಶಾಲೆಗೆ ವಿದ್ಯುತ್ ಬ್ಯಾಕಪ್ ಕೂಡ ಇದೆ, ವರದಿ ಇಂಡಿಯಾ ಟು ಡೇ.



ಇತ್ತೀಚಿನ ವರ್ಷಗಳಲ್ಲಿ ಈ ಶಾಲೆಯಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಘಟಕವನ್ನು ಪ್ರಾರಂಭಿಸಲಾಗಿದೆ ಮತ್ತು ಒಂಬತ್ತು ವಿದ್ಯಾರ್ಥಿಗಳು ಈಗಾಗಲೇ ಮಿಲಿಟರಿ ಪಡೆಗಳನ್ನು ಸೇರಲು ನಿರ್ಧರಿಸಿದ್ದಾರೆ.


ಇವತ್ತಿಗೂ ವೃತ್ತಿಪರ ಶಿಕ್ಷಣ ನೀಡುವುದು ನಮ್ಮ ದೇಶದಲ್ಲಿ ಕೆಲವು ಕೋರ್ಸ್ ಗಳು ಮಾತ್ರ, ಯಾರು ಎಂಜಿನಿಯರ್ ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳುತ್ತಾರೋ ಅವರಿಗೆ ಮಾತ್ರ ಉದ್ಯೋಗ ಎಂಬ ಮನೋಭಾವ ನಮ್ಮೆಲ್ಲರಲ್ಲಿ ಬೆಳೆದು ಬಿಟ್ಟಿದ್ದೆ.


ಇದಕ್ಕೆ ವ್ಯತಿರಿಕ್ತವಾಗಿ ನಾರಾಯಣ್ ಗುಪ್ತಾ ಅವರು ತಮ್ಮ ಶಾಲೆಯಲ್ಲಿಯೇ, ವೃತ್ತಿಪರ ಶಿಕ್ಷಣ ಶಿಕ್ಷಕ ಅಂಕಿತ ಜೈಸ್ವಾಲ್ ಅವರಿಂದ ಒಂಬತ್ತರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ದೊಡ್ಡವರಾದ ಮೇಲೆ ಉದ್ಯೋಗದ ಕುರಿತು ಧೃಢ ನಿರ್ಧಾರವನ್ನು ತೆಗೆದುಕ್ಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಗುಪ್ತಾ, ವರದಿ ಇಂಡಿಯಾ ಟು ಡೇ.


ಸುಸಜ್ಜಿತ ತರಗತಿಗಳು (ಚಿತ್ರ ಕೃಪೆ: ಇಂಡಿಯಾ ಟು ಡೇ)


ರಾಜ್ಯದ ಶಿಕ್ಷಣ ತಜ್ಜರ, ಅಧಿಕಾರಿಗಳ ಮನಗೆದ್ದಿರುವ ಈ ಶಾಲೆ ತುರ್ತುಪರಿಸ್ಥಿತಿಯಲ್ಲಿ ಹೇಗೆ ವರ್ತಿಸಬೇಕು, ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ಹೇಗೆ ತೊಡಗಿಸಿಕೊಳ್ಳಬೇಕು ಎಂಬುವುದನ್ನು ಬೋಧಿಸುತ್ತದೆ. ಇವೆಲ್ಲದರಿಂದ ವಿಧ್ಯಾರ್ಥಿಗಳು ಪೋಷಕರು ತಮ್ಮ ಊರಿನ ಸರಕಾರಿಶಾಲೆಯ ಬಗ್ಗೆ ಅತೀವ ಹೆಮ್ಮೆ ಪಡುತ್ತಾರೆ.


ಅನುಕೂಲಸ್ಥರು ತಮ್ಮ ಮಕ್ಕಳನ್ನು ಕಾನ್ವೆಂಟ್ ಗೆ ಕಳಿಸಿ ವಿಧ್ಯಾಭ್ಯಾಸ ನೀಡಿದರೆ, ಸಾಮಾನ್ಯ ವರ್ಗದವರು, ಬಡವರು ಆಶ್ರಯಿಸುವುದು ಸರಕಾರಿ ಶಾಲೆಗಳನ್ನೇ, ಆಧುನಿಕ ಬೋಧನಾ ವಿಧಾನ, ಜೊತೆಗೆ ಸಾಮಾಜಿಕ ಕಳಕಳಿ ಇವೆರಡನ್ನು ವ್ಯವಸ್ಥಿತವಾಗಿ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಜಾರಿಗೊಳಿಸಿ, ಕಲಿಯುವ ಮನಸ್ಸುಗಳಿಗೆ ಒಂದಿಷ್ಟು ನೀರೆರೆಯ ಬೇಕಾಗಿದೆ. ಎಲ್ಲವನ್ನೂ ಸರಕಾರದ ಮೇಲೆ ಹೊರಿಸದೆ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂದು ಸಾರ್ವಜನಿಕರು ಮುಂದೆ ಬಂದಲ್ಲಿ ನಮ್ಮ ದೇಶದ ಪ್ರತಿಯೊಂದು ಸರಕಾರಿ ಶಾಲೆಯು ಸ್ಮಾರ್ಟ್ ಶಾಲೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.