ಬಯಲು ಶೌಚಕ್ಕೆ ಹೋದ ಕುಟುಂಬಗಳಿಗೆ ರೇಷನ್ ನೀಡಲು ನಿರಾಕರಿಸಿದ ಒಡಿಷಾ ತಾಲೂಕು ಪಂಚಾಯತ್
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಯಲು ಶೌಚಾಲಯ ಮುಕ್ತ ಜಾರಿಗೆ ತರುವ ನಿಟ್ಟಿನಲ್ಲಿ ಒಡಿಶಾದ ತಾಲೂಕು ಪಂಚಾಯಿತಿ ಒಂದು ವಿಭಿನ್ನ ಪ್ರಯತ್ನ ಮಾಡಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನಗಳಲ್ಲಿ ಬಯಲು ಶೌಚಾಲಯ ಮುಕ್ತ ದೇಶ ನಿರ್ಮಾಣ ಕೂಡ ಒಂದು. ಇಡೀ ದೇಶ ಬಯಲು ಬಹಿರ್ದೆಸೆಯಿಂದ ಮುಕ್ತವಾಗಿರಬೇಕೆಂಬ ಉದ್ದೇಶದಿಂದ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಾಣಕ್ಕೆ ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಆದರೂ ಭಾರತವಿನ್ನು ಆ ಗುರಿಯನ್ನು ಸಾಧಿಸಿಲ್ಲ. ಸಾಕಷ್ಟು ಯೋಜನೆಗಳು, ಆದೇಶಗಳು ನೀಡಿದರು ಹಲವಾರು ಹಳ್ಳಿಗಳಲ್ಲಿ ಶೌಚಾಲಯಗಳ ಬಳಕೆ ಮಾಡುತ್ತಿಲ್ಲ. ಜೊತೆಗೆ ಶೌಚಾಲಯಗಳ ನಿರ್ಮಾಣ ಸಂಪೂರ್ಣವಾಗಿ ಆಗಿಲ್ಲ. ಈ ನಿಟ್ಟಿನಲ್ಲಿ ಒಡಿಶಾದ ತಾಲೂಕು ಒಂದರಲ್ಲಿ ಬಯಲಿನಲ್ಲಿ ಶೌಚಾಲಯಕ್ಕೆ ಹೋಗುವ ಕುಟುಂಬಗಳಿಗೆ ರೇಷನ್ ನೀಡಲು ನಿರಾಕರಿಸಿದೆ ತಾಲೂಕು ಪಂಚಾಯತ್.
ಹೌದು, ಒಡಿಶಾ ರಾಜ್ಯದ ಗಾಂಜಾಂ ಜಿಲ್ಲೆಯ ಸನಕೆ ಮುಂಡಿಯ ಗೌತಮಿ ತಾಲೂಕು ಪಂಚಾಯತ್ ಬಯಲು ಮುಕ್ತ ಶೌಚ ಮಾಡಲು ಹೊಸದೊಂದು ಪ್ರಯತ್ನ ಮಾಡಿದ್ದಾರೆ. ಒಟ್ಟು 20 ಕುಟುಂಬಗಳಿಗೆ ಮಾಸಿಕ ಪಡಿತರವನ್ನು ನಿಲ್ಲಿಸುವ ನಿರ್ಧಾರವನ್ನು ಮಾಡಿದೆ ಗೌತಮಿ ತಾಲೂಕು ಪಂಚಾಯತ್ ಆಡಳಿತ ವ್ಯವಸ್ಥೆ. ಅಕ್ಟೋಬರ್ 20 ರಂದು ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಕಳೆದ 11 ದಿನಗಳಲ್ಲಿ ಒಟ್ಟು 20 ಕುಟುಂಬಳಿಗೆ ಪಡಿತರ ವ್ಯವಸ್ಥೆ ನೀಡದಿರಲು ತೀರ್ಮಾನ ಮಾಡಲಾಗಿದೆ ಎಂದು ಗೌತಮಿ ಪಂಚಾಯತ್ನ ಅಧ್ಯಕ್ಷ ಸುಶಾಂತ್ ಸ್ವೈನ್ ಹೇಳಿದ್ದಾರೆ, ವರದಿ ದಿ ಹಿಂದೂ.
ದಿ ಹಿಂದೂ ಜೊತೆ ಮಾತನಾಡುತ್ತಾ ಜಿಲ್ಲಾಧಿಕಾರಿ ವಿಜಯ್ ಅಮೃತ ಕುನ ಹೀಗೆ ಹೇಳಿದ್ದಾರೆ,
ಯಾವುದೇ ವ್ಯಕ್ತಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ರಾಜ್ಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿನ ಪ್ರಯೋಜನಗಳನ್ನು ಮೊಟಕುಗೊಳಿಸಬಾರದು ಎಂಬ ಕಾನೂನೆ ಇದೆ.
ಸದ್ಯ ಆರೋಗ್ಯದ ದೃಷ್ಟಿಯಿಂದ ಶೌಚಾಲಯಗಳ ಅಗತ್ಯ, ಬಳಸುವುದರಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸುವುದಕ್ಕೆ ಈ ವಿಧಾನ ಅನುಸರಿಸಲಾಗುತ್ತಿದೆ. ಸ್ವಸಹಾಯ ಗುಂಪಿನ 300 ಮಹಿಳೆಯರು ಪ್ರತಿ ನಿತ್ಯ ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆವರಗೆ ಹಾಗೂ ಸಂಜೆ 5 ರಿಂದ 7 ರವಗೆ ಗಸ್ತು ತಿರುಗುತ್ತಾರೆ. ಈ ವೇಳೆಯಲ್ಲಿ ಯಾರಾದರೂ ಬಯಲು ಶೌಚಕ್ಕೆ ಹೋಗಿರುವುದು ತಿಳಿದರೆ ಆ ವಿಚಾರವನ್ನು ಪಂಚಾಯತ್ ಆಗಮನಕ್ಕೆ ತರುತ್ತಾರೆ. ಆ ಭಾಗದ ಮಹಿಳೆಯರು ಈ ಕೆಲಸವನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದಾರಂತೆ.
ದಿ ಹಿಂದೂ ವರದಿಯ ಪ್ರಕಾರ ಈ ವಿಭಿನ್ನ ಯೋಜನೆಗೆ ಮೊದಲು ಆ ತಾಲೂಕಿನ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕಾಲಕ್ರಮೇಣ ಬಯಲು ಶೌಚಾಲಯ ಉಪಯೋಗಿಸುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಮನೆಯಲ್ಲಿ ಶೌಚಾಲಯ ಇಲ್ಲದೆ ಇರುವವರಿಗೆ ಪಂಚಾಯತ್ ನಿಂದ ಎರಡು ತಿಂಗಳಲ್ಲಿ ಶೌಚಾಲಯವನ್ನು ಕಟ್ಟಿಸಿಕೊಡಲು ನಿರ್ಧಾರ ಮಾಡಲಾಗಿದೆ.
ಗೌತಮಿ ಪಂಚಾಯತ್ನಲ್ಲಿ ಸುಮಾರು 2,000 ಮನೆಗಳಿದ್ದು, 4,563 ಜನಸಂಖ್ಯೆ ಇದೆ. ಈ ಪೈಕಿ 180 ಕುಟುಂಬಗಳು ಪ್ರಸ್ತುತ ತಮ್ಮ ಮನೆಗಳಲ್ಲಿ ಶೌಚಾಲಯ ಹೊಂದಿಲ್ಲ. ಈಗಾಗಲೇ ಇದರಲ್ಲಿ ಕೆಲವರು ಶೌಚಾಲಯ ನಿರ್ಮಾಣ ಮಾಡಿಸುತ್ತಿದ್ದಾರೆ. ಈ ಮೂಲಕ ಬಯಲು ಶೌಚಕ್ಕೆ ಅಂತ್ಯ ಹಾಡಲು ಒಂದು ತಿಂಗಳ ಕಾಲ ಪಡಿತರ ನೀಡದಿರಲು ಪಂಚಾಯತ್ ನಿರ್ಧರಿಸಿದೆ, ವರದಿ ದಿ ಲಾಜಿಕಲ್ ಇಂಡಿಯಾ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.