ನಾನು ಲಂಚ ತೆಗೆದುಕೊಳ್ಳುವುದಿಲ್ಲ ಎಂಬ ಫಲಕವನ್ನು ತಮ್ಮ ಕಚೇರಿಯಲ್ಲಿ ಹಾಕಿದ ತೆಲಂಗಾಣದ ಸರ್ಕಾರಿ ಅಧಿಕಾರಿ
ತೆಲಂಗಾಣದ ಇಂಜಿನಿಯರ್ ಅಶೋಕ ಕುಮಾರ್ ನಾನು ಲಂಚ ತೆಗೆದುಕೊಳ್ಳುವುದಿಲ್ಲ ಎಂಬ ಫಲಕಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ನಾರ್ದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಾರ್ಪೋರೇಷನ್ ಲಿಮಿಟೆಡ್ (ಎನ್ ಪಿಡಿಸಿಎಲ್) ಕಚೇರಿಯಲ್ಲಿ ಸಹಾಯಕ ವಿಭಾಗೀಯ ಇಂಜಿನಿಯರ್ (ಎಡಿಇ) ಆಗಿ ಕಾರ್ಯನಿರ್ವಹಿಸುತ್ತಿರುವ ಪೊಡೆಟ್ಟ ಅಶೋಕ ಕುಮಾರ್ ಅವರು ತಮ್ಮ ವಿಶಿಷ್ಟ ಕಾರ್ಯದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾರೆ.
ಹೌದು ಅಶೋಕ ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಹೊಸ ಬಗೆಯ ನೋಟಿಸ್ ಬೋರ್ಡ್ ಒಂದನ್ನು ಅಂಟಿಸಿದ್ದಾರೆ. ಅದುವೇ ನಾನು ಲಂಚ ಪಡೆಯುವುದಿಲ್ಲ ಎಂಬ ಸಾಲನ್ನು ಹಾಕಿ ಸ್ಪಷ್ಟವಾಗಿ ತಾವು ಲಂಚ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ.
ಎಡಿಇ ಅಶೋಕ ಕುಮಾರ್ ತೆಲುಗಿನಲ್ಲಿ ನೇನು ಲಂಚಂ ಥೀಸುಕೋನು ಮತ್ತು ಇಂಗ್ಲಿಷ್ ನಲ್ಲಿ I am uncorrupted ಎಂಬ ಫಲಕಗಳನ್ನು ಹಾಕಿದ್ದಾರೆ. ಕುಮಾರ್ ಕಳೆದ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಅನೇಕ ಬಾರಿ ಕುಮಾರ್ ಅವರು ಲಂಚ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು, ವರದಿ ನ್ಯೂಸ್ ಮಿನಿಟ್.
ಇದರಿಂದಾಗಿ ಅವರು ಲಂಚ ಸ್ವೀಕರಿಸುವುದಿಲ್ಲ ಎಂಬುದನ್ನು ವಿವರಿಸಿದ ನಂತರ ಕಳೆದ ಕೆಲವು ತಿಂಗಳುಗಳಿಂದ ಲಂಚ ನಿರಾಕರಣೆಯ ಫಲಕಗಳನ್ನು ತಮ್ಮ ಕಚೇರಿಯಲ್ಲಿ ಹಾಕಿಕೊಂಡಿದ್ದಾರೆ.
ನ್ಯೂಸ್ ಮಿನಿಟ್ ಜೊತೆ ಮಾತನಾಡುತ್ತಾ ಅಶೋಕ ಕುಮಾರ್,
“ಕಚೇರಿಗೆ ಪ್ರತಿದಿನ ಸಾಕಷ್ಟು ಜನ ಬರುತ್ತಾರೆ. ಗುತ್ತಿಗೆದಾರರು ತಮ್ಮ ಬಿಲ್ ಗಳನ್ನು ಮಂಜೂರು ಮಾಡಲು ಮತ್ತು ಫೈಲ್‌ಗಳನ್ನು ಅನುಮೋದಿಸಲು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಲಂಚ ಕೊಡಲು ಮುಂದಾಗುತ್ತಾರೆ. ಪ್ರತಿಬಾರಿಯೂ ನಾನು ಅಂಚ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲು ಬೇಸರವಾಗುತ್ತದೆ. ಹಾಗಾಗಿ ನಾನು ಆ ಫಲಕಗಳನ್ನು ಹಾಕಿದ್ದೇನೆ. ಲಂಚ ಕೊಡಲು ಬರುವವರಿಗೆ ಉತ್ತರವನ್ನು ಆ ಫಲಕವೇ ಕೊಡುತ್ತವೆ” ಎಂದರು.
ಇವರ ಈ ಕಾರ್ಯವನ್ನು ಅನೇಕರು ಮೆಚ್ಚಿದ್ದಾರೆ. ಇನ್ನೂ ಕೆಲವರು ಅಶೋಕ ತಮ್ಮನ್ನು ತಾವು ಪ್ರಾಮಾಣಿಕರು ಎಂದು ಬಿಂಬಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎನ್ನುತ್ತಾರೆ.
2005 ರಲ್ಲಿ ವಿದ್ಯುತ್ ಇಲಾಖೆಗೆ ಸೇರಿದರು. ಅಶೋಕ್ ಅಂದಿನಿಂದ ಭ್ರಷ್ಟರಾಗದೇ ಲಂಚದ ಬದಲಾಗಿ ಉತ್ತಮವಾಗಿ ತಮ್ಮ ಕೆಲಸವನ್ನು ಮಾಡುತ್ತ ದಿಟ್ಟ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷದ ಜೂನ್ ನಲ್ಲಿ ಅಶೋಕ ಕುಮಾರ್ ಎಡಿಇ ಆಗಿ ಬಡ್ತಿ ಪಡೆದಿದ್ದರು. ನಂತರ ತಮ್ಮ ಕಚೇರಿಯಲ್ಲಿ ಫಲಕಗಳನ್ನು ಹಾಕುವುದರ ಮೂಲಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಾರೆ, ವರದಿ ದಿ ಲಾಜಿಕಲ್ ಇಂಡಿಯನ್.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.