ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಲು ಬಸ್ ಖರೀದಿಸಿ ಶಾಲೆಗೆ ಮರಳುವಂತೆ ಮಾಡಿದ ಉಡುಪಿಯ ಈ ಶಿಕ್ಷಕ

ದೈಹಿಕ ಶಿಕ್ಷಣ ಶಿಕ್ಷಕರಾದ ರಾಜಾರಾಂರವರು ದೂರದಿಂದ ಮಕ್ಕಳು ಶಾಲೆಗೆ ಬರುವ ಕಷ್ಟವನ್ನು ನೋಡಲಾಗದೆ ಅದಕ್ಕಾಗಿ ಬಸ್ ಒಂದನ್ನು ಖರೀದಿಸಿ ಮಕ್ಕಳು ಶಾಲೆ ಬಿಡದಂತೆ ನೋಡಿಕೊಂಡಿದ್ದಾರೆ.

ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಮಾಡಲು ಬಸ್ ಖರೀದಿಸಿ ಶಾಲೆಗೆ ಮರಳುವಂತೆ ಮಾಡಿದ ಉಡುಪಿಯ ಈ ಶಿಕ್ಷಕ

Tuesday December 24, 2019,

2 min Read

ಶಿಕ್ಷಕರು ಮಕ್ಕಳ ಭವಿಷ್ಯವನ್ನು ನಿರ್ಮಿಸುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣವಾಗಿರುತ್ತಾರೆ ಎಂಬುದಕ್ಕೆ ನಮ್ಮಲ್ಲಿ ಹಲವಾರು ನಿದರ್ಶನಗಳಿವೆ. ಶಾಲೆ ಬಿಡುತ್ತಿದ್ದ ಮಕ್ಕಳನ್ನು ಶಾಲೆಯನ್ನು ವರ್ಣಮಯಗೊಳಿಸಿ ಮರಳಿ ಶಾಲೆಗೆ ಬರುವಂತೆ ಮಾಡಿದ ಶಿಕ್ಷಕರಿದ್ದಾರೆ. ಶಾಲೆಯಲ್ಲಿಯೆ ಮಕ್ಕಳ ಪತ್ರಿಕೆಯನ್ನು ಆರಂಭಿಸಿ ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಿದವರಿದ್ದಾರೆ. ಈಗ ಇವರ ಸಾಲಿಗೆ ಉಡುಪಿಯ ಶಿಕ್ಷಕರೊಬ್ಬರು ಸೇರಿಕೊಳ್ಳುತ್ತಾರೆ.


ಉಡುಪಿ ಜಿಲ್ಲೆಯ ಬ್ರಹ್ಮಾವರ್ ತಾಲ್ಲೂಕಿನ ಬಾರಾಳಿ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ 3 ಕಿ.ಮೀ ಅರಣ್ಯ ಪ್ರದೇಶದ ಮೂಲಕ ನಡೆದುಕೊಂಡು ಬರಬೇಕಾಗಿದ್ದರಿಂದ ಒಂದು ವರ್ಷದ ಹಿಂದೆ ಅನೇಕ ವಿದ್ಯಾರ್ಥಿಗಳು ಕ್ರಮೇಣ ಹೊರಗುಳಿಯಲು ಪ್ರಾರಂಭಿಸಿದರು.


ಮಕ್ಕಳೊಂದಿಗೆ ಶಿಕ್ಷಕರಾದ ರಾಜಾರಾಂ (ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)




ಬಾರಾಳಿ ಶಾಲೆಯು 60 ವರ್ಷಗಳ ಹಿನ್ನೆಲೆಯನ್ನು ಹೊಂದಿದ್ದು, 3,500-4000 ಹಳೆಯ ವಿದ್ಯಾರ್ಥಿಗಳಿದ್ದು, ಹಿಂದೆ ಶಾಲೆಯಲ್ಲಿ‌ 200 ರಿಂದ 300 ವಿದ್ಯಾರ್ಥಿಗಳಿದ್ದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲಾರಂಭಿಸಲಾಯಿತು, ವರದಿ ಡೆಕ್ಕನ್ ಹೆರಾಲ್ಡ್.


ದ ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡಿದ ರಾಜಾರಾಂ,


"ಮಕ್ಕಳು ಮನೆಯಿಂದ ಶಾಲೆಗೆ ತೆರಳಲು ಯಾವುದೇ ರಸ್ತೆಗಳಿಲ್ಲ. ಕಾಡಿನ ಮೂಲಕ ಹಾದು ಬರಬೇಕು. ಶಾಲೆಗೆ ಬರಬೇಕೆಂದರೆ ಒಟ್ಟು ಆರು ಕಿ.ಮೀ ದೂರವನ್ನು ಕ್ರಮಿಸಬೇಕಾಗುತ್ತಿತ್ತು. ಇದರಿಂದ ಹೆಣ್ಣುಮಕ್ಕಳ ಮನೆಯಲ್ಲಿ ಭಯಗೊಳ್ಳುತ್ತಿದ್ದರಿಂದ ಅವರು ಕ್ರಮೇಣ ಶಾಲೆಯನ್ನು ತೊರೆಯಲಾರಂಭಿಸಿದರು."


ಇದರಿಂದಾಗಿ ಬೇಸರಗೊಂಡ ರಾಜಾರಾಂ ಶಾಲೆಯ ಹಳೆಯ ವಿದ್ಯಾರ್ಥಿಯಾದ ಬೆಂಗಳೂರಿನಲ್ಲಿ ಉದ್ಯಮವೊಂದನ್ನು ನಡೆಸುತ್ತಿರುವ ವಿಜಯ್ ಹೆಗ್ಡೆಯವರನ್ನು ಭೇಟಿ ಮಾಡುತ್ತಾರೆ‌.


"ಮಕ್ಕಳು ಶಾಲೆಯಿಂದ ಹೊರಗುಳಿಯಲಾಂಭಿಸಿದಾಗ, ಇದರಿಂದ ಆಗ ನಾವು ಶಾಲೆಯನ್ನು ಮುಚ್ಚುವ ಹೆದರಿಕೆಗೆ ಒಳಗಾಗಿದ್ದೇವು. ಆಗ ಒಂದು ದಿನ, ಎಷ್ಟು ಮಕ್ಕಳು ಶಾಲೆ ಬಿಟ್ಟರು ಎಂದು ಎಣಿಸುತ್ತಿದ್ದೆ ಮತ್ತು ಇದರಿಂದ ಸಮಾಧಾನಗೊಂಡಿದ್ದೆ. ಪ್ರತಿವಾರ ಕನಿಷ್ಟ ಐದಾರು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು. ಆಗ ವಿಜಯ ಹೆಗ್ಡೆಯವರು ಬಸ್ ಖರೀದಿಸುವ ಆಲೋಚಣೆಯೊಂದನ್ನು ಪ್ರಸ್ತಾಪಿಸಿದರು,” ಎನ್ನುತ್ತಾರೆ ರಾಜಾರಾಂ.


ಬಾರಾಳಿ ಶಾಲೆಯ ಬಸ್ (ಚಿತ್ರಕೃಪೆ: ದಿ ನ್ಯೂಸ್ ಮಿನಿಟ್)


ಆರು ತಿಂಗಳ ಹಿಂದೆ ಇನ್ನೊಬ್ಬ ಹಳೆಯ ವಿದ್ಯಾರ್ಥಿ ಗಣೇಶ್ ಶೆಟ್ಟಿ ಹಾಗೂ ವಿಜಯ್ ಹೆಗ್ಡೆ ಹಣವನ್ನು ಸಂಗ್ರಹಿಸಿ ಶಾಲೆಗಾಗಿ ಬಸ್ ಖರೀದಿಸಿದರು‌.


ಬಸ್ ಚಾಲಕನನ್ನು ನೇಮಿಸಿಕೊಳ್ಳುವುದು ಆರ್ಥಿಕ ಸ್ಥಿತಿಯನ್ನು ಮೀರಿದ್ದರಿಂದ ರಾಜಾರಾಂ ಸ್ವತಃ ಬಸ್ ಚಾಲನೆಯನ್ನು ಕಲಿತು, ಬಸ್ ಓಡಿಸಲು ನಿರ್ಧರಿಸಿದರು. ನಂತರ ಬಸ್ ಓಡಿಸಲು ಪರವಾನಿಗೆಯನ್ನು ಪಡೆದು, ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ದು, ಮನೆಗೆ ಬಿಡಲಾರಂಭಿಸಿದರು. ಇದರಿಂದ ಶಾಲೆಯ ಮಕ್ಕಳ ಸಂಖ್ಯೆ‌ 50 ಇದ್ದಿದ್ದು, 90ಕ್ಕೆ ಏರಿತು, ವರದಿ ಗ್ಲೊಬಲ್ ಸಿಟಿಜನ್.


ಶಾಲೆಯು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗುತ್ತದೆ. ನಮ್ಮ ಶಾಲೆಯಲ್ಲಿ ನಾನು, ಮುಖ್ಯೋಪಾಧ್ಯಾಯರು ಸೇರಿದಂತೆ ಒಟ್ಟು ಮೂರು ಜನ ಶಿಕ್ಷಕರಿದ್ದೇವೆ. ಮೊದಲ ಪ್ರಯಾಣದ ವೇಳೆಗೆ ಒಬ್ಬ ಶಿಕ್ಷಕರು ಶಾಲೆಗೆ ಆಗಮಿಸುತ್ತಾರೆ ಎನ್ನುತ್ತಾರೆ ರಾಜಾರಾಂ. ಪ್ರತಿದಿನ ರಾಜಾರಾಂ ಬೆಳಿಗ್ಗೆ ಮನೆಯಿಂದ ಬೇಗನೆ ಹೊರಟು 9.20ರ ವೇಳೆಗೆ ನಾಲ್ಕು ಪಿಕಪ್ ಟ್ರಿಪ್ ಗಳನ್ನು ಪೂರ್ಣಗೊಳಿಸುತ್ತಾರೆ, ವರದಿ ದಿ ನ್ಯೂಸ್ ಮಿನಿಟ್.


ಶ್ರೀರ, ಕಲ್ಲುಬೆಟ್ಟು, ಹೊರಲಿಜೆಡ್ಡು, ಅಲ್ಥಾರು, ಕಾರ್ತಿಬೆಟ್ಟು, ಕಜ್ರಲ್ಲಿ ಮತ್ತು ಮುಸಾಪುರಿಯಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಾರೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂದು ಪ್ರದೇಶಾವಾರು‌ ವಿಂಗಡಿಸಿ ಅದರ ಅನುಗುಣವಾಗಿ ಮಕ್ಕಳನ್ನು ಪಿಕಪ್ ಮಾಡಲಾಗುತ್ತದೆ.


ಒಟ್ಟಾರೆ, ಅವರು ಪ್ರತಿದಿನ 60 ಕಿ.ಮೀ ಓಡಿಸುತ್ತಾರೆ. ತಿಂಗಳಿಗೆ ಬಸ್ ನಿರ್ವಹಣೆಗೆ 60,000 ರಿಂದ 70,000 ರೂ.ಗಳ ಮೊತ್ತ ಬೇಕಾಗುತ್ತದೆ ಎಂದು ರಾಜಾರಾಮ್ ಹೇಳಿದರು. ವರದಿ ಡೆಕ್ಕನ್ ಹೆರಾಲ್ಡ್.


ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ, ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಮಾಡುವಲ್ಲಿ ಇಂತಹ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಶಿಕ್ಷಕರು ಎಲ್ಲರಿಗೂ‌ ಮಾದರಿ. ಒಬ್ಬ ಶಿಕ್ಷಕ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾನೆ ಎಂಬುದಕ್ಕೆ ಇವರೇ ಉದಾಹರಣೆ‌.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.