Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ವಾಯುಮಾಲಿನ್ಯದಿಂದ ಏಳು ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದ ಕೃತಕ ಶ್ವಾಸಕೋಶ

ಮಹಾನಗರದ ಈ ವಾಯುಮಾಲಿನ್ಯವು ಜನಜೀವನದ ಮೇಲೆ ಉಂಟುಮಾಡುವ ಪರಿಣಾಮವನ್ನು ಅರಿಯಲು ವಾಟವರನ್ ಫೌಂಡೇಶನ್ ಬಾಂದ್ರಾದ ಆರ್. ಡಿ. ನ್ಯಾಷನಲ್ ಕಾಲೇಜ್ ಬಳಿ ಒಂದು ಜೋಡಿ ಕೃತಕ ಶ್ವಾಸಕೋಶವನ್ನು ಸ್ಥಾಪಿಸಿದೆ.

ವಾಯುಮಾಲಿನ್ಯದಿಂದ ಏಳು ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದ ಕೃತಕ ಶ್ವಾಸಕೋಶ

Friday January 31, 2020 , 2 min Read

ಪರಿಸರ ಮಾಲಿನ್ಯ ಇಂದಿನ ದಿನದ ಬಹುದೊಡ್ಡ ಸವಾಲು. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಮಾಲಿನ್ಯ ಒಂದ್ಕಕೊಂದು ಕೊಂಡಿಯಂತೆ ಬೆಸೆಯಲ್ಪಟ್ಟಿದೆ. ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನ ಪಡೆದ ಭಾರತ ತನ್ನ ಪ್ರತಿಷ್ಠಿತ ಮಹಾನಗರಗಳಲ್ಲಿ ದಿನದಿಂದ ದಿನಕ್ಕೆ ತೀವ್ರತರವಾದ ವಾಯುಮಾಲಿನ್ಯವನ್ನು ಎದುರಿಸುತ್ತಿದೆ.


ಜನಸಂಖ್ಯೆ ಜಾಸ್ತಿಯಾದಂತೆ, ಅಗತ್ಯತೆಗೆ, ಶ್ರೀಮಂತಿಕೆಯ ತೋರ್ಪಡೆಗೆ, ಹೀಗೆ ವಿವಿಧ ಕಾರಣಗಳಿಗೆ ವಾಹನಗಳ ಬಳಕೆ ಸಹ ಜಾಸ್ತಿಯಾಗುತ್ತಿದೆ. ಮಹಾನಗರದ ಈ ವಾಯುಮಾಲಿನ್ಯವು ಜನಜೀವನದ ಮೇಲೆ ಉಂಟುಮಾಡುವ ಪರಿಣಾಮವನ್ನು ಅರಿಯಲು ವಾಟವರನ್ ಫೌಂಡೇಶನ್ ಬಾಂದ್ರಾದ ಆರ್. ಡಿ. ನ್ಯಾಷನಲ್ ಕಾಲೇಜ್ ಬಳಿ ಒಂದು ಜೋಡಿ ಕೃತಕ ಶ್ವಾಸಕೋಶವನ್ನು ಸ್ಥಾಪಿಸಿತು.


ಕೃತಕ ಶ್ವಾಸಕೋಶ ಕಪ್ಪುಬಣ್ಣಕ್ಕೆ ತಿರುಗಿರುವುದು (ಚಿತ್ರಕೃಪೆ: ದಿ ಲಾಜಿಕಲ್ ಇಂಡಿಯನ್)


ಅದಕ್ಕೆ ‘ದಿ ಬಿಲ್ಬೋರ್ಡ್ ದಟ್ ಬ್ರೀಥ್ಸ್' ಎಂದು ಹೆಸರಿಸಲಾಗಿದೆ. ಇದು ಮಾನವನ ಶ್ವಾಸಕೋಶವನ್ನು ಚಿತ್ರಿಸುವ ಒಂದು ವಿಶಿಷ್ಟವಾದ ಸ್ಥಾಪನೆಯಾಗಿದ್ದು, ವಾಯುಮಾಲಿನ್ಯದ ಪ್ರಭಾವವನ್ನು ಪ್ರದರ್ಶಿಸಲು ಗಾಳಿಯ ಕಣವನ್ನು ಸಾಂದ್ರತೆಯ ಆಧಾರದಲ್ಲಿ ಹಿಡಿಟ್ಟುಕೊಳ್ಳುವ ಮನವಸಹಜ ಶ್ವಾಸಕೋಶದ (HEPA) ಫಿಲ್ಟರ್‌ಗಳೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ. ಇದೇ ರೀತಿಯ ರಚನೆಯನ್ನು ಇತರ ಮಹಾನಗರಗಳಾದ ಬೆಂಗಳೂರು, ಪುಣೆ, ಕೊಲ್ಕತ್ತಾದಲ್ಲಿ ಸಹ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ, ವರದಿ ಮುಂಬೈ ಲೈವ್.


ಈ ರಚನೆ ಮನುಷ್ಯನ ಶ್ವಾಸಕೋಶದ ಮೇಲೆ ವಾಯುಮಾಲಿನ್ಯ ಉಂಟುಮಾಡುವ ಪ್ರಭಾವವನ್ನು ಸೂಚಿಸಲು ಮತ್ತು ಅದು ಜನಸಾಮಾನ್ಯರಲ್ಲಿ ಆದಷ್ಟು ಕಡಿಮೆ ವಾಹನಗಳನ್ನು ಬಳಸುವಂತೆ ಜಾಗೃತಿಯನ್ನು ಮೂಡಿಸಲು ಯತ್ನಿಸುತ್ತಿದೆ. ರಚನೆಯನ್ನು ಸ್ಥಾಪಿಸಿದ ಒಂದು ವಾರದ ಒಳಗೆ ಅದು ಕಪ್ಪುಬಣ್ಣಕ್ಕೆ ತಿರುಗಿದ್ದು, ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಭಯಂಕರ ಪ್ರಭಾವನ್ನು ಸೂಚಿಸಿದೆ.


ಎನ್‌ಡಿಟಿವಿ ಯೊಂದಿಗೆ ಮಾತನಾಡಿದ ವಾಟವರನ್ ಫೌಂಡೇಶನ್ ಸ್ಥಾಪಕ ಭಗವಾನ್ ಕೇಶಭಟ್ಟ,


"ವೃತ್ತಿಪರರು, ಉದ್ಯಮಿಗಳು ಮತ್ತು ಕಾರ್ಪೊರೇಟ್‌ಗಳು ಖಾಸಗಿ ಕಾರುಗಳಲ್ಲಿ ಪ್ರಯಾಣಿಸುತ್ತಾರೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೂಲಕ ಪ್ರತಿದಿನ ಮೂರು ಲಕ್ಷ ಕಾರುಗಳು ಹಾದು ಹೋಗುತ್ತವೆ. ಇದು ಗಾಳಿಯ ಗುಣಮಟ್ಟದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮತ್ತು ವಾಯುಮಾಲಿನ್ಯದ ಮುಖ್ಯ ಕಾರಣವೆಂದರೆ ವಾಹನ ಹೊರಸೂಸುವಿಕೆ ಮತ್ತು ನಂತರ ನಿರ್ಮಾಣದಿಂದ ಧೂಳು," ಎಂದರು.


ಕಳೆದ ವಾರ ನಗರದಲ್ಲಿ ವಾಯುಮಾಲಿನ್ಯ ಗಗನಕ್ಕೇರಿದ್ದು ಜನವರಿ 22, ಮಂಗಳವಾರ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ 340 ರ ವಾಯು ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ದಾಖಲಿಸಿದೆ, ಅದು ‘ಅತ್ಯಂತ ಕಳಪೆ' ವಿಭಾಗದಲ್ಲಿ ಬರುತ್ತದೆ. ಸಿಸ್ಟಮ್ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (ಸಫಾರ್), ಜನವರಿ 21 ರಂದು ನಗರಕ್ಕೆ ವಾಯು ಗುಣಮಟ್ಟ ಸೂಚ್ಯಂಕ 344 (ಅತ್ಯಂತ ಕಳಪೆ) ಮಟ್ಟದಲ್ಲಿದೆ ಎಂದು ಹೇಳಿದೆ.


ಇದೆ ರೀತಿ ಮುಂದುವರೆದರೆ ಮಾನವನ ಜೀವನದಮೇಲೆ, ಆರೋಗ್ಯದಮೇಲೆ ವಾಯುಮಾಲಿನ್ಯ ಅತ್ಯಂತ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ವಾಹನವನ್ನು ಮತ್ತು ಸೈಕಲ್ ಅನ್ನು ಹತ್ತಿರದ ಸ್ಥಳಗಳಲ್ಲಿ ಬಳಸಿದರೆ ಉತ್ತಮ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.