ಕೇವಲ 1 ರೂಪಾಯಿಗೆ ಇಡ್ಲಿ ಮಾರುವ 82 ವರ್ಷದ ಅಜ್ಜಿ
ಕೊಯಮತ್ತೂರಿನ ವಡಿವೇಲಂಪಾಳಯಂನಲ್ಲಿ ಇಡ್ಲಿ ತಯಾರಿಸಿ, ಕಳೆದ 15 ವರ್ಷಗಳಿಂದಲೂ ಕೇವಲ 1 ರೂಪಾಯಿಗೆ ಮಾರುತ್ತಿರುವ ಅಜ್ಜಿ ಎಮ್ ಕಮಲಥಾಳ್, ಆನಂದ್ ಮಹೀಂದ್ರಾ ಅವರ ಟ್ವೀಟ್‌ನ ನಂತರ ಎಲ್ಲರ ಗಮನ ಸೆಳೆದಿದ್ದಾರೆ.
ಅಡುಗೆ ಮಾಡುವುದು ಜನರಲ್ಲಿ ವಿವಿಧ ಭಾವನೆಗಳನ್ನು ತರಿಸುತ್ತದೆ – ಕೆಲವರಿಗೆ ಅದು ಕಾಯಕ, ಹಲವರಿಗೆ ಅದು ಜವಬ್ದಾರಿ ಇನ್ನೂ ಕೆಲವರಿಗೆ ಅದು ಹವ್ಯಾಸವಾಗಿದೆ. ಕೊಯಮತ್ತೂರಿನ ವಡಿವೇಲಂಪಾಳಯಂನಲ್ಲಿ ವಾಸಿಸುತ್ತಿರುವ 82 ವರ್ಷದ ಅಜ್ಜಿ ಎಂ. ಕಮಲಥಾಳ್ ಗೆ ಅಡುಗೆ ಮಾಡುವುದು ಪ್ರವೃತ್ತಿಯಾಗಿದೆ. ಮುಖ್ಯವಾಗಿ 30 ವರ್ಷಗಳಿಂದ ಇಡ್ಲಿ ತಯಾರಿಸುವ ಕಾಯಕವೆ ಅವರ ಉತ್ಸಾಹ ತೋರಿಸುತ್ತದೆ.
ಆದರೆ, ಆಶ್ಚರ್ಯಕರ ಸಂಗತಿಯೇನು ಗೊತ್ತೆ? ಈ ಬಿಸಿಬಿಸಿ ಇಡ್ಲಿಗಳ ಬೆಲೆ ಕೇವಲ 1 ರೂಪಾಯಿ – ಅದೂ ಸಹ ಕಳೆದ 15 ವರ್ಷಗಳಿಂದ ಒಂದೆ ದರದಲ್ಲಿದೆ. ಕಮಲಥಾಳ್ ಅಜ್ಜಿ ತಮ್ಮ ಮೊಮ್ಮಗನ ಹೆಂಡತಿ ಪಿ. ಆರತಿಯ ಸಹಾಯದೊಂದಿಗೆ ಎಲ್ಲವನ್ನೂ ತಾವೇ ಮಾಡುತ್ತಾರೆ,
ದಿ ಹಿಂದೂ ವರದಿ ಪ್ರಕಾರ, ಅವರು ಮುಂಜಾನೆ 5 ಗಂಟೆಗೇ ಎದ್ದು 8 ಕೆಜಿ ಅಕ್ಕಿ ಹಾಕಿ ಇಡ್ಲಿ ತಯಾರಿಸಿ, ರುಬ್ಬುವ ಗುಂಡಿನಲ್ಲಿ ಚಟ್ನಿ ತಯಾರಿಸುತ್ತಾರೆ.
ಬೆಳಗ್ಗೆ 6 ಗಂಟೆಗೆ ತಮ್ಮ ಮಳಿಗೆ ತೆರೆಯುವ ಕಮಲಥಾಳ್ ಅಜ್ಜಿ, ತಯಾರಿಸಿದ ಇಡ್ಲಿ ಖಾಲಿಯಾದಾಗಲೇ ಮುಚ್ಚುವುದು. ಗ್ರಾಹಕರು 7 ಗಂಟೆಗೆ ಬರುತ್ತಾರೆ ಹಾಗೂ ಕಮಲಥಾಳ್, ತಮ್ಮ ಸಾಂಪ್ರದಾಯಿಕ ಇಡ್ಲಿ ತಯಾರಿಕ ಪಾತ್ರೆಯನ್ನು ಒಲೆಯ ಮೇಲೆ ಬೇಯಲು ಇಡುತ್ತಾರೆ.
ಗ್ಯಾಸ್ ಸ್ಟೌಅನ್ನು ಏಕೆ ಉಪಯೋಗಿಸುವುದಿಲ್ಲ ಎಂದು ಕೇಳಿದಾಗ ಅವರು, “ನನಗೆ ಗ್ಯಾಸ್ ಸ್ಟೌ ಉಪಯೋಗಿಸಲು ಬರುವುದಿಲ್ಲ” ಎಂದರು
ಆದರೆ ವಸ್ತುಸ್ಥಿತಿ ಬದಲಾದದ್ದು, ಮಹೀಂದ್ರ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂಧ್ ಮಹೀಂದ್ರ ಕಮಲಥಾಳ್ ಅಡುಗೆ ಮಾಡುತ್ತಿರುವ ದೃಶ್ಯವನ್ನು ಟ್ವಿಟ್ಟರ್‌ನಲ್ಲಿ ಹಾಕಿದಾಗ. ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಇದು ಅಜ್ಜಿ ಕಮಲಥಾಳ್ ಅವರನ್ನು ರಾತ್ರೋರಾತ್ರಿ ಜನರಿಗೆ ಪರಿಚಯಿಸಿ ಸಂಚಲನವನ್ನುಂಟು ಮಾಡಿತು.
ಅಜ್ಜಿಯ ಈ ಕೆಲಸವನ್ನು ನೋಡಿ ಖುಷಿಯಾದ ಆನಂದ ಮಹೀಂದ್ರಾ ರವರು ತಮ್ಮ ಟ್ವೀಟ್ ನಲ್ಲಿ ಅವರು ಕಟ್ಟಿಗೆ ಉಪಯೋಗಿಸಿ ಕೆಲಸ ಮಾಡುವುದನ್ನು ಗಮನಿಸಿದ್ದೇನೆ. ಅವರಿಗೆ ಎಲ್‌ಪಿಜಿ ಸಿಲಿಂಡರ್ ನೀಡಿ ನೇರವಾಗಲು ಬಯಸುತ್ತೇನೆ ಎಂದು ತಮ್ಮ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ.
ಟ್ವೀಟ್ ವೈರಲ್ ಆಗುತ್ತಿದ್ದಂತೆಯೆ, ಕೊಯಮತ್ತೂರಿನ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಅಥವಾ ಬಿಪಿಸಿಎಲ್ ಕಮಲಥಾಳ್ ಅಜ್ಜಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಿತು. ಈ ಸುದ್ದಿ ಟ್ವಿಟ್ಟರ್‌ನಲ್ಲಿ ವ್ಯಾಪಕ ಶ್ಲಾಘನೆಗೆ ಒಳಪಟ್ಟಿತು. ಕೇಂದ್ರ ಸರಕಾರದ ಇಂಧನ ಸಚಿವರಾದ ಶ್ರೀ ಧರ್ಮೇಂದ್ರ ಪ್ರಾಧನ್ ತಮ್ಮ ಟ್ವೀಟ್‌ನಲ್ಲಿ,
ಕಮಲಥಾಲ್ ಅವರ ಉತ್ಸಾಹ ಮತ್ತು ಬದ್ಧತೆಗೆ ಸಲಾಂ. ಎಲ್ಪಿಜಿ ಸಂಪರ್ಕವನ್ನು ಪಡೆಯಲು ಸ್ಥಳೀಯ ಒಎಂಸಿ ಅಧಿಕಾರಿಗಳ ಮೂಲಕ ಅವರಿಗೆ ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ. ಎಲ್ಲಾ ಸಮಸ್ಯೆಗಳನ್ನು ಮೀರಿ ಸಾಧಿಸುವ ಜನರಿಗೆ ನಾವೆಲ್ಲರೂ ಬೆಂಬಲಕೊಡಬೇಕು ಎಂದು ಉಲ್ಲೇಖಿಸಿದ್ದಾರೆ.
ಆನಂದ್ ಮಹೀಂದ್ರ ಕಮಲಥಾಳ್ ಅಜ್ಜಿಯವರ ಎಲ್‌ಪಿಜಿ ಸಂಪರ್ಕದ ವೆಚ್ಚ ಬರಿಸುವುದಾಗಿ ಹೇಳಿದರು.
ಇಡ್ಲಿಯ ದರವನ್ನು ಹೆಚ್ಚು ಮಾಡುವುದರ ಬಗ್ಗೆ ಕೇಳಿದಾಗ, ಕಮಲಥಾಳ್,
“ಈ ಕಾರ್ಯವನ್ನು ನಾವು ಮಾಡುತ್ತಿರುವುದು ಪುಣ್ಯದ ಫಲಕ್ಕಾಗಿ. ಕೆಲವರು 10 ರೂಪಾಯಿಗೆ ಹಾಗೂ ಕೆಲವರು 25 ರೂಪಾಯಿಗೆ ಉಪಹಾರ ಸೇವಿಸಲಿಚ್ಚಿಸುತ್ತಾರೆ. ಅವರು ಸೇವಿಸಲಿ ಬಿಡಿ” ಎಂದರು – ದಿ ಹಿಂದೂ ವರದಿ.
ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.